...

10 views

।। ಕಲಿಯುಗ ಕಾಮಧೇನು ರಾಯ ರಾಘವೇಂದ್ರ ಗುರುವೇ ।।
ಮಂತ್ರಾಲಯ ಗುರುರಾಯ ಕರುಣಿಸೋ ಏನ್ನ ನೀನು
ಭಕ್ತರ ವೃಂದಕೆ ಕರುಣಸಾಗರ ಕಲ್ಪವೃಕ್ಷ ನೀನಯ್ಯ
ಕಲಿಯುಗ ಕಣ್ಮಣಿ ರಾಯ ಗುರುರಾಯ ನೀನಯ್ಯ
ನಿನ್ನಾಸರೆಯಲೆ ಬಂಧಿಸು ಎನ್ನನು
ಭಕ್ತಿಯ ಸಾಗರ್ ಆತ್ಮಾವಲೋಕಿಸು ಏನಗಯ್ಯ

ತಂದೆಯು ನೀನು ತಾಯಿಯು ನೀನು, ಬಂಧು ಬಳಗ ನೀನಯ್ಯ
ಅಪರೋಕ್ಷಿತ ಜ್ಞಾನಿ ದಯಾಸಾಗರ ಗುರುರಾಯ ನೀನಯ್ಯ

ಕಲಿಯುಗ ಕಾಮಧೇನು ವರ ಗುರುರಾಯ ನೀನಯ್ಯ
ಅಜ್ಞಾನಿಯು ನಾನು ಕರುಣಿಸು ಎನ್ನನು ರಾಯ ರಾಘವೇಂದ್ರ

ಶರಣು ಪೋಗುವೆ ನಿನಗಯ್ಯ ನಂಬಿದೆ ಪಾದಂಭುಜ ನಿನ್ನದಯ್ಯ
ತುಂಗಾ ತೀರದಿ ನಿಂತಿಹೆ ನೀನು
ಭಕ್ತರ ವೃಂದಕ್ಕೆ ಸಲಹುವೆ ನೀನಯ್ಯ
🌹🌹💐💐🌹🌹
© SripadAlgudkar ಕಾವ್ಯಶ್ರೀ
#sripad #kannadaquotes