...

11 views

ನಾ ಕೊಟ್ಟ ಸೀರೆ...
ನಾ ಕೊಟ್ಟ
ಸೀರೆಯ ಉಟ್ಟು
ನುಲಿಯಬೇಡವೇ ಬೆಡಗಿ

ನಿನ್ನ ಹಣೆಗೆ ಮುತ್ತಿಟ್ಟು
ಕೆನ್ನೆ ಕಚ್ಚಿದ್ದು ಹೇಳಬೇಡವೇ ತುಡುಗಿ

ನಕ್ಕಿದ್ದು ಸಾಕು
ಮುತ್ತಿಕ್ಕಿ ಹೋಗು
ಇಲ್ಲೇನು ನಡೆದಿಲ್ಲವೆನ್ನುವಂತಿರುವೆನು

ನಾ ಬಳಿ ಬಂದರೆ
ನೀನೆಲ್ಲಿ ಓಡುವೆ?

ಬಳ್ಳಿಯಂತೆ ತಬ್ಬಿ
ಒಪ್ಪದ ಮಾತಿಗೆ ಮೆತ್ತಗೆ

ಮುತ್ತಿಟ್ಟು ಹೋಗುವೆ
ನೀನೇನು ಹೇಳಿದರು ಕೇಳದಂತೋಗುವೆನು...

~ ನಾನ್ಯಾರು ✍️