...

7 views

✴️✴️ ಶೀರ್ಷಿಕೆ:- ಕುಡಿ✴️✴️

ಕರುಳಿನ ಕುಡಿಯು ಬೆಳೆಯಿತು ಮಡಿಲಲಿ.
ಮಾತೃ ವಾತ್ಸಲ್ಯದ ಮಮತೆಯ ಪ್ರೀತಿಯಲಿ.
ತನ್ನದೇ ಪ್ರತಿಬಿಂಬ ನೋಡುವಳು ಮಗುವಿನಲಿ.
ಮೊದಲ ಅಕ್ಷರವ ಕಲಿಸುವಳು ಮನೆಯಲಿ.

ದಾಹವ ನೀಗುವದಕೆ ಕುಡಿಯುವ ತಂಪುನೀರು.
ಅಡುಗೆಯ ಮಾಡುವದಕ್ಕೆ ಬಳಸುವದು ತಿಳಿನೀರು.
ತೆಂಗಿನ ಕಾಯಿಯ ರುಚಿಕರವಾದ ಎಳೆನೀರು.
ಬೇಸಿಗೆಯ ಉಷ್ಣತೆಗೆ ಕುಡಿಯಿರಿ ಮಡಿಕೆನೀರು.

ಕುಡಿಬಾಳೆಯ ಸಂಭ್ರಮದ ಸ್ವಾದಿಷ್ಟ ತಿಂಡಿಯು.
ಮದುವೆ ಮುಂಜಿಯಲಿ ಬಡಿಸುವುದು ಬಾಳೆಲೆಯು
ಕುಡಿಸುವುದು ದೊನ್ನೆಯಲಿ ಮಾವಿನರಸ ಸಿಹಿಯು.
ದೀಪದ ಹಣತೆಯಲ್ಲಿ ಬೆಳೆಯುವದು ಕುಡಿಯು.

ಕುಡಿದು ಸಂಸಾರವ ನಾಶವ ತಡೆಯಬೇಕು.
ದಣಿವಿಲ್ಲದೆ ದುಡಿಯುವ ಮನಸು ಛಲವಿರಬೇಕು.
ಬೆಳೆಯುವ ಮೊಳಕೆಯ ಕುಡಿಯ ರಕ್ಷಿಸಬೇಕು.
ತಾರತಮ್ಯದ ಬಾಳಿನಲಿ ಕೂಡಿ ಬದುಕಬೇಕು.

ಶ್ರೀಪಾದ ಆಲಗೂಡಕರ ✴️✍️✴️

© SripadAlgudkar ಕಾವ್ಯಶ್ರೀ