...

12 views

ಸದಾ ನಗುತಿರು ನೀ...
ಈ ಜಗದಲಿ,...
ನಗುವಿರಲಿ, ಖುಷಿಯಿರಲಿ,
ಪ್ರೀತಿಯಿರಲಿ, ಸ್ನೇಹವಿರಲಿ,
ಸಹಯೋಗವಿರಲಿ, ಸಹಬಾಳ್ವೆಯಿರಲಿ,
ಸಹಕಾರವಿರಲಿ, ಉಪಕಾರವಿರಲಿ,
ನಲಿವಿರಲಿ, ಒಲವಿರಲಿ, ಗೆಲುವಿರಲಿ,
ಹರುಷವಿರಲಿ, ಸಮರಸವಿರಲಿ, ಏಕರಸವಿರಲಿ,
ಉಲ್ಲಾಸವಿರಲಿ, ಉತ್ಸಾಹವಿರಲಿ, ಉತ್ಸವವಿರಲಿ,
ಶುಭ ಭಾವನೆಗಳಿರಲಿ, ಶುಭ ಕಾಮನೆಗಳಿರಲಿ,
ಶುಭ ಹಾರೈಕೆಗಳಿರಲಿ, ಶುಭಾಶೀರ್ವಾದಗಳಿರಲಿ,
ಶುಭ ಸಂಕಲ್ಪಗಳು ಶೋಭಾಯಮಾನವಾಗಿರಲಿ,
ಚಂದನದ ಕಂಪು ಸೂಸಲಿ, ಕ್ಷೀರಸಾಗರ ಉಕ್ಕಲಿ,
ಪ್ರಕೃತಿಯೆಲ್ಲ ಸುಶೋಭಿತವಾಗಿರಲಿ,
ಪವಿತ್ರತೆಯಿರಲಿ, ಸುಖ-ಶಾಂತಿ-ನೆಮ್ಮದಿಯಿರಲಿ,
ಕರುಣೆ ತುಂಬಿರಲಿ, ಸುಜ್ಞಾನವಿರಲಿ, ಆನಂದವಿರಲಿ,
ಮುಗ್ಧತೆಯಿರಲಿ, ಸ್ನಿಗ್ಧತೆಯಿರಲಿ,
ಪ್ರಶಾಂತತೆಯಿರಲಿ, ಸತ್ ಚಿತ್ತವಿರಲಿ,
ಸರ್ವರ ಕಲ್ಯಾಣವಾಗಿರಲಿ, ಅಭಿವೃದ್ಧಿ ಹೊಂದಿರಲಿ,
ಸಿರಿ-ಸಂಪತ್ತು-ಸಮೃದ್ಧಿ ತುಳುಕಲಿ,
ಸರ್ವರಲ್ಲಿ ಸರ್ವಕಲೆಗಳು-ಸರ್ವಶಕ್ತಿಗಳು-ಸದ್ಗುಣಗಳು ಬೆಳೆಯಲಿ, ಬೆಳಗಲಿ,
ಸದ್ಭಾವನೆ ಮೂಡಲಿ, ನಯವಿರಲಿ, ವಿನಮ್ರತೆಯಿರಲಿ,
ವಿಶಾಲ ಹೃದಯವಿರಲಿ, ಚೊಕ್ಕ ಮನಸಿರಲಿ,
ಹೃದಯದ ಹೂಗಳು ಅರಳಿರಲಿ,
ಆ ಅರಳು ಹೂಗಳ ಪರಿಮಳ ಎಲ್ಲೆಲ್ಲೂ ಹರಡಲಿ,
ಸರ್ವರ ಮನದಲ್ಲಿ ಶಿವ ಪರಮಾತ್ಮನ ದಿವ್ಯ ಸ್ಮೃತಿಯಿರಲಿ,
ಆ ಪರಮಜ್ಯೋತಿಯ ಪವಿತ್ರ ಪ್ರಕಾಶವು ಸರ್ವ ಕಡೆಗೂ ಪಸರಿಸಲಿ...

© Vanishri Patil
#WritcoQuote #VanishriPatil #writco #motivational #inspirational #Hindi #vote #quote #thoughts #writcoapp