...

7 views

ಚದುರಂಗ
ಜೀವನವೇ ಒಂದು ಚದುರಂಗ
ಬಾಳಿನ ಗೋಳಿನ ರಣರಂಗ
ದಾಳದ ಚುಕ್ಕೆಗಳ ವಿಚಿತ್ರ ಸಂಗ
ಆಗು ಹೋಗುಗಳ ನಾಟಕ ರಂಗ

ಬಯಸಿದ ಆಸೆಗಳು ದೂರದ ಬೆಟ್ಟಗಳು
ಮನಸಿಗು ನಿಲುಕದ ಬೆಳಕಿನ ಕಿರಣಗಳು
ಬದುಕಿನ ತಿರುವು ಕೊಡುವ ದಾಳಗಳು
ಆಕಾಂಕ್ಷೆಗಳ ನೆಲಜಲ ಕೆಡವುವ ವಿಚಿತ್ರಗಳು

ಸಮಯ ಆಡಿಸುವ ಗೊಂಬೆಯಿದು
ಬಡವ ಶ್ರೀಮಂತರ ಅಂತರವಿದು
ಹುಚ್ಚು ಮನಸ್ಸಿನ ವಿಚಿತ್ರ ಕುದುರೆಯಿದು
ಕವಲೊಡೆದ ಕಂಬನಿಯ ದಾರಿಯಿದು

ಗೆಲುವಿನ ಹೊಸ್ತಿಲ ಮುಟ್ಟಿಸುವ ನಶೆಯಿದು
ಸೋಲಿನ ನಂತರ ಜೀವನ ಬರಡಾಗುವದು
ದಾಳದ ತಿರುವುಗಳು ಬಲು ವಿಚಿತ್ರವಿದು
ಸೋಲು ಗೆಲುವಿನ ನಡುವಿನ ನಾದವಿದು

ಮೋಸಗಾರ ಬೀಸುವ ಆಸೆಯ ಬಲೆಯಿದು
ಸಂಮೋಹನ ತೊಡಿಸುವ ಮುಖವಾಡವಿದು
ಬಾಳ ಚದುರಂಗದ ಮೋಸದ ಜೂಜಾಟವಿದು
ಪಗಡೆಯಾಟ ಸೃಷ್ಟಿಸಿದ ಮಹಾಭಾರತವಿದು

ಶ್ರೀಪಾದ ಆಲಗೂಡಕರ ✍️
ಪುಣೆ

© SripadAlgudkar ಕಾವ್ಯಶ್ರೀ