...

10 views

ಮೂರೇ ಮೂರು ಸಾಲು...
ಕಡು ಕತ್ತಲೆಯೊಳಗೆ
ಬೆಳಗುವ ದೀಪದಂತೆ!

ನಿನ್ನ ಕಂಗಳು
ಮೇಣದ ಬತ್ತಿಯಂತೆ ಪ್ರಜ್ವಲಿಸುತ್ತಿವೆ!

ಕಪ್ಪು ಕೇಶರಾಶಿಗೆ
ಎದುರಾಳಿಯಂತೆ!

ಬಿಲ್ಲಿನ ಹುಬ್ಬಿನ ಮಧ್ಯೆ
ಕಡು ಕಪ್ಪು ಬಿಂದಿಯೊಂದು
ಬಾಣದಂತೆ ಕಣ್ಕುಕ್ಕುತ್ತಿದೆ!

ನಿನ್ನಂದಕ್ಕೆ ಸೋತು
ಶರಣಾದ ನಾನು!

ಮುಸುಕಾಕಿದ
ಮೊಗದ ಚೆಲುವ ಕುರಿತು ನನಗೆ!

ಮೂರೇ ಮೂರು
ಸಾಲು ಬರೆಯದೆ ಇರಲಾಗಲಿಲ್ಲ...!!!

~ ನಾನ್ಯಾರು ✍️