...

9 views

ನಿನ್ನಂದವ ಅಳೆಯುವ ಮಾಪನ ಇದ್ದಿದ್ದರೆ?
ನಿನ್ನಂದವ ಅಳೆಯುವ
ಮಾಪನ ಇದ್ದಿದ್ದರೆ ಚೆನ್ನಾಗಿತ್ತು

ದಿನ ಕಳೆದಂತೆ
ನೀನೆಷ್ಟು ಸುಂದರವಾಗಿ ಮಿನುಗುವೆ

ಮುಗಿಲಾಚೆಗೂ
ನಿನ್ನ ಮಿಂಚಿನಂಥ
ಮೊಗದ ಹೊಳಪಿಗೆ

ಚರ್ಚೆಯೇ ಚರ್ಚೆಯಂತೆ
ಕುರ್ಚಿಯು ಹೋದರೇನಂತೆ?

ಅವಳನ್ನೊಮ್ಮೆ ಕಂಡು
ಪ್ರೇಮ ನಿವೇದನೆ ನೀಡುವೆನೆಂದು

ಇಂದ್ರ ಸೂರ್ಯ
ಚಂದ್ರರಿಗೆಲ್ಲಾ ಹೇಳುತ್ತಿದ್ದನಂತೆ

ನಿನ್ನಿಚ್ಛೆಯಿಂದ ಸ್ವಇಚ್ಛೆಯ
ಪ್ರೇಮಿ ನಾನೆಂದೂ ನೀ ಹೇಳಬಾರದೇ...

~ #ನಾನ್ಯಾರು ✍️