...

4 views

ರಾಘವಾಂಕನ ಕಾವ್ಯ
ಹರಿಶ್ಚಂದ್ರ ಕಾವ್ಯದಲ್ಲಿ ಬರುವ ಈ ಸಂಭಾಷಣೆಗಳು ರಾಜ ಹರಿಶ್ಚಂದ್ರ ಮತ್ತು ವಿಶ್ವಾಮಿತ್ರನ ಆಶ್ರಮದ ಗಾನರಾಣಿಯರ ನಡುವಿನದ್ದು..
(In Harishchandra Kavya, When Harishchandra entered premises Vishwamitra's Ashram, cheerleaders vishwamitra created by using his bad gunas like Anger, lust , pride to seduce Harishchandra & to trap him and to achieve his pledge.. approached him,

When they came and show wonderful hospitality to the king, he tells them to ask wishes and they ask him to marry them!!
When he rejects and tells them it is Adharma for a king to marry those who born out of sins (characterless) and he's already married and commited to his wife queen Chandramati..
They argue what is sin and what is righteousness..
and they try to expose king's hypocrisy before angry sage Vishwamitra enters the scene)

ಗಾನರಾಣಿಯರು:- ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ ಆವ ಲೇಸು? ಇನಿದುಳ್ಳ ಮಧುವೊನೊಸೆದು ಈವ ನೊಳ ಆವ ಲೇಸು?
ಅಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನ್ ಆವ ಲೇಸು? ದೇವರಿಗೆ ಸಲ್ಲವೇ?
(Cheerleaders :- "The milk which we consider as holy and divine comes from the cow's flesh,
Is that superior?
The honey we consume generated by an insect (bee) 🐝
Is that superior?
Kasturi comes from the navel of deer 🦌
Is that superior?
Isn't these offered to deities..?!")

ಹರಿಶ್ಚಂದ್ರ :- ಅಕ್ಕಕ್ಕು!!..
ಬಚ್ಚಲುದಕಂ ತಿಳದಡೆ ಆರ ಮೀಹಕ್ಕೆ ಯೋಗ್ಯಂ?
ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಂ?
ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಂ?
(Harishchandra:-
"No No!! Not like that..
Is it suitable to bathe after knowing it's drainage water
Just because dog gives milk, is it suitable for human consumption
When a flower grows in a devil's land is it suitable to decorate one's hair"
)


ಗಾನರಾಣಿಯರು:-
ಹಾಡನೊಲಿದು ಆಲಿಸಿದ ಕಿವಿಗೆ ಹೊಲೆಯಿಲ್ಲ..
ಮಾತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ..
ರೂಪನೆರೆ ನೋಡಿದ ವಿಲೋಚನಕೆ ಹೊಲೆಯಿಲ್ಲ..
ಮೆಯ್ ಮುಡಿಗಳಿಂ ಸುಳಿವ ತಂಗಾಳಿಯಿಂ ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ ಹೊಲೆಯಿಲ್ಲ..
ಸೋಂಕಿಂಗೆ ಹೊಲೆಯುಂಟಾಯ್ತೆ?!ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕು ಅಧಮ, ಒಂದು ಅಧಿಕವೇ?!.
(Cheerleaders:-
" When you're hearing and enjoying our singing, did that make your ears despicable?.. No!!
When you spoke to us and praised our performance did your mouth become despicable?.. No!!
When you saw us dancing and enjoyed the show did your eyes become despicable?.. No!!
When the breeze around us carried our fragrance and you smelled it that didn't make your nose despicable..
Now if we touch you how will it make you unworthy ?!
In five sensory organs, how.is that four are noble and one is humble/ignoble ?!"
)
ರಾಜನು ಅವರ ನಡತೆಯ ಕಾರಣ ಹೇಳಿ ಮದುವೆಗೆ ನಿರಾಕರಿಸಿದಾಗ ಅವರ ನಡುವೆ ನಡೆದ ವಾದವನ್ನು ಕವಿಯು ಹೋಲಿಕೆಗಳೊಂದಿಗೆ ಎಷ್ಟು ಚಂದವಾಗಿ ಚಿತ್ರಿಸಿದ್ದಾನೆ ಅಲ್ಲವಾ..
ರಾಜನ ತೋರುಗಾಣಿಕೆಯ ಧರ್ಮ ಮತ್ತು ಗಾನರಾಣಿಯರ ಪಟ್ಟುಬಿಡದ ಪ್ರಯತ್ನ ಚಿತ್ರಿತವಾಗಿದೆ
ಈ ಸಂಭಾಷಣೆಯಲ್ಲಿ ಅಡಗಿರುವ ಅರ್ಥಗಳು, ವ್ಯಂಗ್ಯ ಇಂದಿನ ಸಮಾಜಕ್ಕೂ ಹೋಲುವಂಥದ್ದು..
ಹರಿಶ್ಚಂದ್ರ ಕಾವ್ಯ ಓದುವಾಗ ಈ ಸಂಭಾಷಣೆಗಳು ತುಂಬಾ ಅರ್ಥಗರ್ಭಿತವಾಗಿದೆ ಎನಿಸಿತು.. ಅದಕ್ಕೆ ಹಂಚಿಕೊಂಡೆ...
ಹೇಗಿದೆ.. ನಿಮ್ಮ ಅಭಿಪ್ರಾಯ ತಿಳಿಸಿ..🙌🙏

#ಕನ್ನಡ #ಕಾವ್ಯ #HarishchandraKavya #ರಾಘವಾಂಕ #poetry #writco #writcopoem

© ಚೈತನ್ಯ