...

7 views

ನತ್ತಿಗಿಟ್ಟ ಮುತ್ತು...
ನತ್ತಿನ ಮೂಗುತಿಗೆ
ಮೆತ್ತಗೆ ಮುತ್ತಿಕ್ಕಿದ್ದಕ್ಕೇನೋ

ನಿನ್ನ ಹಸಿರು ಬಳೆ
ಕೆಂಪಗೆ ರಂಗೇರಿದೆ

ಕಿವಿಯೋಲೆ ಏನು
ಕಿವಿ ಚುಚ್ಚಲಿಲ್ಲವೇನು?

ಹುಬ್ಬಾರಿಸಿ ಹಣೆ ಬಿಂದಿ
ಏತಕೋ ಹೆದರಿದಂತಿದೆ

ಕಂಗಳಲಿ ಕಾಂತಿಯಿಲ್ಲ
ಕೆಂದುಟಿಯಲಿ ಭೀತಿಯಿದೆ

ಮುದ್ದು ಮೊಗದೊಳಗೆ
ನಾಚಿಕೆಯಿದ್ದರೂ ತುಸು ಕೋಪವೇಕೆ?

ನತ್ತಿಗಿಟ್ಟ ಮುತ್ತು
ಮೆತ್ತಗೆ ಕೂಡಬಾರದಿತ್ತೆ...

~ ನಾನ್ಯಾರು ✍️