...

13 views

ಆ ಕ್ಷಣದ ಭಾವುಕತೆ ಜೊತೆಗೆ
ಶೀರ್ಷಿಕೆ: *ಆ ಕ್ಷಣದ ಭಾವುಕತೆ ಜೊತೆಗೆ*

*ನಾನು ಭಾವುಕಳಾದದ್ದು* ,,, !

ಆ ಕೋಣೆಯೊಳಗೆ ಗಾಳಿ ಬೆಳಕು ಇಲ್ಲದ್ದಕ್ಕಲ್ಲಾ,
ಗುಡುಗು ಮಿಂಚಿನ ಆರ್ಭಟಕ್ಕೆ, ಹೆದರಿದ ಕಂದಮ್ಮಗಳ
ಎದೆಗಪ್ಪಿ ಧೈರ್ಯ ತುಂಬಿದ ಮನವೀಗ,
ಅವರ ಘರ್ಜನೆ ಗೆ ಹೆದರಿ ಮೂಲೆಗುಂಪಾಗಿದ್ದಕ್ಕೂ ಅಲ್ಲಾ.

ಒಡೆದ ನಗ್ನಪಾದದಲ್ಲೇ ಬಿರು ಬಿಸಿಲಿನ ತಾಪ ಲೆಕ್ಕಿಸದೇ,
ಹಾದಿ-ಬೀದಿ ಸುತ್ತುತ್ತಾ ವ್ಯಾಪಾರ ಮಾಡುತ್ತಿರುವವರ ನೋಡಿಯೂ
ಕಿಂಚಿತ್ತು ಕರುಣೆ ತೋರದಿದ್ದಕ್ಕಲ್ಲಾ,
ಮಡಿಕೆ ಕುಡಿಕೆ ಮಾಡಿ, ಬಿಸಿಲು ಮಳೆಗಂಜದೇ,,,
ಊರೂರು ಅಲೆದು ಹೈರಾಣಾ ಗಿ ಬಂದು,
ಗಂಜಿ ಕುಡಿದು ಮಲಗಿದ್ದಕ್ಕೂ ಅಲ್ಲಾ,,,

ಅಹರ್ನಿಶೆ ಎನ್ನದೇ ದುಡಿದು
ಅವರ ಬಾಳಿಗೊಂದು, ನೆಲೆ ತಂದುಕೊಟ್ಟು,
ಇಂದು ಸೂರಿಲ್ಲದೇ ಕಂಬನಿಯ ದಿನನಿತ್ಯದೋರಾಟದಲಿ
ಮನವನ್ನು ಕಲ್ಲಾಗಿಸಿಕೊಂಡು ನಿಂತ ಪರಿಗೂ ಅಲ್ಲಾ,
ಆಸರೆಯಾಗಿದ್ದಾಗಿನ ಅನನ್ಯದೊಲವು,
ಅವಲಂಬಿತರಾದಾಗ ಕಿಂಚಿತ್ತು ಇಲ್ಲದ್ದಕ್ಕಲ್ಲಾ.

ಒಂದರ್ಧ ಆಯುಷ್ಯದ ಬಹುಪಾಲು ಬದುಕನ್ನು
ವೇದನೆ ಯಿಂದಲೇ ಕಳೆಯುತ್ತಿರುವವರ ಮುಂದೆಯೇ,
ಅವರ ತಾಳ್ಮೆ, ಸಹನೆ, ಸಂಯಮದ ಬಗ್ಗೆ ಬೋಧಿಸಿದ್ದಕ್ಕೂ ಅಲ್ಲಾ,,,
ಅಂದು ಒಲವಿನಾ ನೀರು ಹಾಕಿ ಬೆಳೆಸಿ ಹತ್ತಾರು ಜನರಿಗೆ ಆಶ್ರಯವಿತ್ತ ಮರವಿಂದು,
ಬೋಳಾಗಿ ಬರಡಾಗಿ ನಿಂತದ್ದಕ್ಕೂ ಅಲ್ಲಾ.

ಕಾಲ ಎಷ್ಟೇ ಸರಿದು, ಸವೆದು,ಸುಕ್ಕಾದರೂ ಅವರ ಅಪರಿಮಿತದೊಲವು
ಎಂದೂ ಮುದುಡಿ ಮುಪ್ಪಾಗದಿದ್ದಕ್ಕೆ,
ಸವಿ ನೆನಪುಗಳ ಉಸಿರಾಟವೇ ಬದುಕೆಂಬ ನಾಣ್ಣುಡಿ ಗೆ
✍️ಪ್ರಭಾ ಮೈಸೂರು