...

8 views

ಶೀರ್ಷಿಕೆ: ಇದು ಅಷ್ಟು ಸುಲಭವೂ ಅಲ್ಲಾ ಬಿಡಿ
ಒಂದು ಕಾಲದಲ್ಲಿ ಈ ಮನಸ್ಸೂ ಕೂಡ
ಪ್ರಫುಲ್ಲವಾಗಿ ಹಾರಾಡುತ್ತಿತ್ತು.
ಅದು ಆಗ ಮಾತ್ರ,
ಮನಸ್ಸಿನ ತುಂಬಾ ರಂಗುರಂಗಿನ ಚಿತ್ತಾರ
ಈಗಲೂ ಕೂಡ ಮನದ ಹಕ್ಕಿ,
ರೆಕ್ಕೆ ಬಿಚ್ಚಿ ಹಾರಾಡುತ್ತಿದೆ,,
ಆ ನೆನಪಿನಾಳದಿಂದ.
ಸಮಯ ಸರಿದು
ದಿನಗಳುರುಳುತ್ತಿದ್ದಂತೆ,
ಜೊತೆಯಲ್ಲಿದ್ದವರೆಲ್ಲಾ
ಒಬ್ಬೊಬ್ಬರಾಗಿ ಕಣ್ಮರೆಯಾಗುತ್ತಿದ್ದಾರೆಂದು
ಹೇಗೆ ನಂಬಲಿ?
ಎಲ್ಲರನ್ನು ಅರಿತಿದ್ದವ ಮಾತ್ರ
ಇನ್ನೂ ತಟಸ್ಥವಾಗಿ ಅಲ್ಲೇ ಉಳಿದಿದ್ದಾನೆ.
ಬೇಸರವೇನಿದ್ದರೂ ಅದು
ನಲಿವಿಗೆ ಮಾತ್ರ,
ನೋವಿನಲ್ಲೂ ಮಂದಹಾಸ ಸುಮ್ಮನೆ ಬರುವುದಿಲ್ಲ.
ಮನದಾಳದ ಬಯಕೆಗಳ ಅದುಮಿಟ್ಟುಕೊಂಡ ಮೇಲೆ
ಮರೀಚಿಕೆಯಾದ ನಗುವ ಮರೆತು,
ಅಳುವನ್ನು ಬಾಳ ಸಂಗಾತಿಯನ್ನಾಗಿಸಿ ಕೊಳ್ಳುವುದು
ಅಷ್ಟಕ್ಕೂ,
ಮನಸ್ಸಿನ ದುಗುಡ ಕಳೆದುಕೊಳ್ಳುವುದೆಂದರೇ,,
ಅಷ್ಟು ಸುಲಭವೂ ಅಲ್ಲಾ ಬಿಡಿ.